ಹೌದಾ ಹಾಂಗಾರಾ ಅಲ್ರಿ ಯಪ್ಪಾ ಈಗ ನಾವು ಇಮ್ಮಡಿ ಪುಲಕೇಶಿ ಆಳಿದ ಬಾದಾಮಿ ಬಗ್ಗೆ ಸ್ವಲ್ಪ ತಿಳ್ಕೊಳ್ಳುನಲ್ಲ....
ಹೇಳತೀನಿ ಕೇಳ್ರಿ ........ ಮೊದಲ ಬಾದಾಮಿದು ಇತಿಹಾಸ ತಿಳ್ಕೊಳ್ಳುನ್ನು
ºËzÀ®è....
ಇತಿಹಾಸ :-
'ಬಾದಾಮಿ' ಇದು ಚಾಲುಕ್ಯರು ಅಳಿದ ನಾಡು. ಚಾಲುಕ್ಯರ ಮಹಾಸಾಮ್ರಾಜ್ಯ ಆಗಿ ಮೆರೆದ ಬಾದಾಮಿ ಇವತ್ತ ಬಾಗಲಕ್ವಾಟಿ ಜಿಲ್ಲ್ಯಾಗ ತಾಲೂಕು ಕೇಂದ್ರ ಆಗೈತಿ . ಕೆಂಪು ಕಲ್ಲಿನ ಗುಡ್ದಾನ ಕೊರದು ತಯಾರ ಮಾಡಿದ ಬಾದಾಮಿಯ ಗುಹಾಲಯಗಳು ವಿಶ್ವವಿಖ್ಯಾತ ಆಗ್ಯಾವಪ್ಪಾ, ಈ ಗುಡ್ಡದ ಕೆಳಗ ಒಂದು ದೊಡ್ಡ ಹೊಂಡ ಐತಪಾ... ಆ ಹೊಂಡದ ಪಶ್ಚಿಮ ದಂಡಿಮ್ಯಾಗ ಬಾದಾಮಿ ಪಟ್ಟಣ ಹಬ್ಬಿ ನಿಂತೈತಿ ಏನಪಾ..... ಗುಡ್ಡದ ಮ್ಯಾಗ ಕ್ವಾಟಿ, ಚಾಲುಕ್ಯರ ಕಾಲದಾಗಿನ್ನು ದೇವಾಲಯಗಳು, ಕಟ್ಟಡಗಳೂ ಅದಾವಪಾ . ಹೊಂಡದ ಉತ್ತರದ ಮ್ಯಾಗ ಕಲ್ಲ ಬಂಡಿ ಮ್ಯಾಗ ಕಪ್ಪೆ ಅರಭಟ್ಟನ ಶಾಸನಾ ಐತಪಾ.......ಅದರ ಹಂತೆಕನ ಇನ್ನೊಂದು ಬಂಡಿ ಮ್ಯಾಗ ಮುನ್ನಿದ್ದ ಶಾಸನವನ್ನು ಅಳಿಸಿ ಕೆತ್ತಿರುವ ಪಲ್ಲವ ನರಸಿಂಹವರ್ಮನ ಜಯಶಾಸನವನ್ನೂ ಇಲ್ಲೇ ನೋಡಬಹುದಪಾ . ಭಾರತ, ದೇವಸ್ಥಾನ ನಿರ್ಮಾಣದ ಕಲೆಯ ತೊಟ್ಟಿಲು ಅಂತಾ ಹೇಳತಾರಲ್ಲಾ ಅದಕ್ಕ ಪೂರಕ ಅನ್ನುವಾಂಗ ಐಹೊಳೆ (ಐವಳಿ) ಪಟ್ಟದಕಲ್ಲುಗಳು , ಚಾಲುಕ್ಯರ ಪೂರ್ವ ರಾಜಧಾನಿಯಾಗಿದ್ದಿರಬಹುದಾದ ಮಹಾಕೂಟಾನು ಬಾದಾಮಿಗೆ ಸ್ವಲ್ಪ ದೂರದಾಗ ಐತಪಾ .ಸಾಮಾನ್ಯ ಶಕವರ್ಷ ೬೪೨ರಲ್ಲಿ ಇಮ್ಮಡಿ ಪುಲಕೇಶಿಯ ಕೊನೆಗಾಲದಲ್ಲಿ ಪಲ್ಲವರು ಬಾದಾಮಿನ ಮುತ್ತಿಗೆ ಹಾಕಿ ಹಾಳುಗೆಡವಿದರು . ಸಾಮ್ರಾಜ್ಯದಾಗ ಅರಾಜಕತೆ ಮೂಡಿತಂತಪಾ . ೧೩ ವರ್ಷಗಳ ನಂತರ ಪುಲಿಕೇಶಿ ಮಗ ವಿಕ್ರಮಾದಿತ್ಯ ಪಲ್ಲವರನ್ನು ಸೋಲಿಸಿ ರಾಜ್ಯಾನಾ ಮತ್ತ ಕಟ್ಟಿದ್ನಂತಪಾ . ಸಾ.ಶ ೭೫೦ರ ವೇಳೆಗೆ ಸಾಮ್ರಾಜ್ಯ ಬಲಗುಂದಿತ್ತಂತ . ೭೫೩ರಲ್ಲಿ ರಾಷ್ಟ್ರಕೂಟರ ವಂಶದವನಾದ ದಂತಿದುರ್ಗ ಸಾಮ್ರಾಟ ಇಮ್ಮಡಿ ಕೀರ್ತಿವರ್ಮನ್ನ
ಬದಿಗೊತ್ತಿ ತನ್ನ ರಾಜವಂಶವನ್ನು ಸ್ಥಾಪಿಸಿದ್ನಂತಪಾ . ಅಲ್ಲಿಗೆ ಬಾದಾಮಿಯ ಚರಿತ್ರೆಯ ಮುಖಪುಟದಿಂದ ಮರಿ ಆತು ನೋಡ್ರಿ ಅಣ್ಣಾರ . ಮುಂದೆ ಚಾಲುಕ್ಯ ವಂಶದವರು ಮತ್ತ ರಾಜ್ಯಕ್ಕೆ ಬಂದಾಗ ಕಲ್ಯಾಣರ ರಾಜಧಾನಿ ಆತು ಅಂತಾ ಹೇಳ್ತಾರಪಾ.
ಇಡೀ ಭಾರತದ ಚರಿತ್ರೆನ ಸಂಸ್ಕೃತಿಗಳ ಮ್ಯಾಲೆ ತಮ್ಮ ಅಚ್ಚೊತ್ತಿದ ಚಾಲುಕ್ಯರ ಬಾದಾಮಿಯು ಸರ್ವಥಾ ಪ್ರೇಕ್ಷಣೀಯ, ಸರ್ವಥಾ ಆದರಣೀಯ ಆಗೈತ್ರಿ.
ಬಾದಾಮಿಗೆ ಬೆಂಗಳೂರು, ಬಾಗಲಕ್ವಾಟಿ , ಬಿಜಾಪುರ, ಹೊಸಪ್ಯಾಟಿ , ಹುಬ್ಬಳ್ಳಿ, ಧಾರವಾಡ, ಗದಗ ಬ್ಯಾರೆ ಬ್ಯಾರೆ ಕಡೆಗಳಿಂದ ಬಸ್ ಸಂಪರ್ಕ ಐತಿ . ಗದಗ-ಸೊಲ್ಲಾಪುರ ರೈಲ್ವೆ ಮಾರ್ಗಾನು ಬಾದಾಮಿ ಮ್ಯಾಗ ಹಾದು ಹೋಕೈತಿ. ವಸ್ತಿ ಇರಾಕ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದವ್ರು (KSTDC) ನಡೆಸುವ ಹೊಟೆಲ್ ಬಾಳ ಅನುಕೂಲ ಆಗೈತಿ. ಇದ ಅಲ್ದ ಬದ್ಯಾಮ್ಯಾಗ ವಸ್ತಿ ಇರಾಕ ಏನು ತೊಂದರಿ ಇಲ್ಲ ನೋಡ್ರಿ . ಬಹಳಷ್ಟು ಲಾಜಿಂಗ ಅದಾವು . ಬಸ್ಟ್ಯಾಂಡ್ ಹಂತೆಕ ಐದಾರು ಲಾಜಿಂಗ ಅದಾವು. ಅದು ಬ್ಯಾಡ ಅಂದ್ರ ಮೇನ್ ರೋಡಿಗೆ ಬಾದಾಮಿ ಊರ ನಟ್ಟ ನಡಬರಕ ಶ್ರೀ ಲಕ್ಷ್ಮೀ ವಿಲಾಸ ಲಾಜಿಂಗ ಐತಿ ಅದು ಬಾಳ ಛಲೋ ಐತಿ ನೋಡ್ರಿ ಅಣ್ಣಾರ .
![]() |
![]() |
ಒಂದನೇ ಗುಹೆ |
ಹೆಸರಿನ ವೈಶಿಷ್ಟ್ಯ :-
'ಬಾದಾಮಿ' ಗೆ ಮೊದಲು 'ವಾತಾಪಿ ' ಅಂತಾ ಹೆಸರ ಇತ್ತ ನೋಡ್ರಿ. ಬಾದಾಮ್ಯಾಗ 'ವಾತಾಪಿ' ಮತ್ತ 'ಇಲ್ವಲ' ಅಂತ ಇಬ್ಬರು ಸಹೋದರ ರಾಕ್ಷಸರಿದ್ದರಂತ . ಅವರುಗಳು ಅಲ್ಲಿರುವ ಜನ್ರಿಗೆ ತುಂಬಾ ತೊಂದರೆ ಕೊಡ್ತಿದ್ರಂತ. ಬಾಳ ªÀµÀðzÁVAzÀ ಈ ಹಿಂಸೆನ್ನ ತಡಕೊಂಡ ಬಂದ ಜನಾ ಆ ರಾಕ್ಷಸರಿಂದ ಮುಕ್ತಿ ಪಡೆಯಾಕ ದಾರಿ ಹುಡುಕತ್ತಿದ್ರಂತ. ಆಗ ದೇಶಾಂತರ ಹೊಂಟ ರಾಮಾಯಣ ಕಾಲದ ಅಗಸ್ತ್ಯ ಋಷಿಗಳು ಅಲ್ಲಿಗೆ ಬಂದು ಸಹೋದರ ರಾಕ್ಷಸರಿಬ್ಬರನ್ನು ಕೊಂದು ಅಲ್ಲಿ ಜನ್ರಿಗೆ ನೆಮ್ಮದಿ ಕೊಟ್ರಂತ. ಅಣ್ಣ-ತಮ್ಮ ರಾಕ್ಷಸರಿದ್ದರಲ್ಲ ಅದರೊಳಗ ಒಬ್ಬಂವನ ಹೆಸರು ವಾತಾಪಿ ಅಂತ ಇತ್ತಂತ ಅದ ಹೆಸರಿನಿಂದನ ಈ ಊರಿಗೆ 'ವಾತಾಪಿಪುರ' ಅಂತ ಕರೀತಿದ್ರಂತ. ಮುಂದ ದಿವ್ಸ ಹ್ವಾದಾಂಗ ಕೆಂಪು ಬಣ್ಣದ ಬಾದಾಮಿ ಬೀಜದ ಕಲ್ಲುಗಳ ಬೆಟ್ಟವನ್ನು ಹೊಂದಿದ ಈ ನಾಡಿಗೆ 'ಬಾದಾಮಿ' ಎಂಬ ಹೆಸರು ಬಂತು ಅಂತ ಪ್ರತೀತಿ ಐತಿ . ಹೀಂಗಾಗಿ ಈ ಪಟ್ಟಣ ಬಾದಾಮಿ ಎಂಬ ಹೆಸರಿನಲ್ಲಿ ಜಗತ್ಪ್ರಸಿದ್ದಿಯನ್ನು ಪಡೀತು .
ಬಾದಾಮಿ ಗುಹೆಗಳು ಅಂತಾರಲ್ಲಾ ಅವು ಒಟ್ಟ ನಾಕ ಅದಾವು ನೋಡ್ರಿ, ಅಲ್ಲೆ ಕಾಣತೈತಲ್ಲ ಅದು ಒಂದನೇ ಗುಹೆ ನೋಡ್ರಿ, ಅಲ್ಲೆ ಶಿವಂಗ ಸಂಬಂಧ ಪಟ್ಟದ್ದ ಅದಾವು ನೋಡ್ರಿ... ಅದನ್ನ ಮುಟ್ಟ ಬೇಕಾದ್ರ ನಾಲತ್ತು ಪ್ಯಾಟನಿಗಿ ಹತ್ತಿ ಹ್ವಾದ್ರ ನಾಕು ಕಂಬ ಇರುವಂಥ ಆಚಿಕ ಇಚಿಕ ಶಿವನ ದ್ವಾರಪಾಲಕರು ನಿಂತಂಥ ಒಂದ ಪವಿತ್ರ ಆದಂತಾ ಹಾಲ್ ಸಿಗ್ತೈತಿ ಅದನ್ನ ನೋಡಾಕ ಒಳಗ ಹ್ಫ್ವಾದ್ರ ಏನ್ ನೋಡುದೋ ಯಪ್ಪಾ ಅಷ್ಟ ದೊಡ್ಡ ಕಲ್ಲ ಬಂಡ್ಯಾಗ ಹ್ಯಾಂಗ್ ಕೆತ್ಯಾರ್ರಿ ಎಷ್ಟ ಜಿನಗ ಕೆತ್ಯಾರ ಅಂದ್ರ ಅಷ್ಟ ಚಂದಾಂಗ ಕೆತ್ಯಾರ ನೋಡ್ರಿ , ಅದರ ಬಲ ಭಾಗಕ್ಕ ಶಿವ ತಾಂಡವ ನೃತ್ಯ ಮಾಡಾಕ ಹತ್ಯಾನ ಅವಂಗ ಹದಿನೆಂಟು ಕೈ ಅದಾವು ಅದು ಐದು ಫೂಟು ದೊಡ್ದ್ದೈತಿ , ಅವನ ಕಾಲಹಂತೆಕ ಗಣಪತಿ ಮತ್ತ ನಂದಿ ಡಾನ್ಸ ಮಾಡುದನ್ನ ಕೆತ್ಯಾರ ನೋಡ್ರಿ. ಇನ್ನ ಒಳಗಾ ಹ್ವಾದ್ರ ಛತ್ತ ಮ್ಯಾಲೆ ಚಿತ್ತಾರ ಬಿಡಿಸ್ಯಾರ್ರಿ ನಿಂತ ನೋಡಾಕ ಎರಡು ಕಣ್ಣ ಸಾಲಂಗಿಲ್ರಿ. ಅಲ್ಲೆ ನೋಡ್ರಿ ಮಹಿಷಮ ರ್ಧಿನಿ, ಕುಬ್ಜ ಗಣಗಳ, ನಾಗರಾಜ ಮತ್ತ ವಿದ್ಯಾಧರ ಇವರ ಚಿತ್ರ ಹ್ಯಾಂಗ್ ಕೆತ್ಯಾರ ನೋಡ್ರಿ. ಬರ್ರಿ ಮುಂದ ಎರಡನೇ ಗುಹೆ ನೋಡೂಣಂತ, ನೋಡ್ರಿ ಈ ಗುಹೆ ಐತಲ್ಲ ಇದು ಪೂರಾ ವಿಷ್ಣುಗ ಸಂಬಂಧಪಟ್ಟದ್ದ ನೋಡ್ರಿ, ವಿಷ್ಣು ಮೂರು ಪಾದದಷ್ಟು ಭೂಮಿ ಕೇಳಿದ ಕತಿ ಗೊತ್ತೈತಲ್ಲಾ. ಅದನ್ನ ಇಲ್ಲೆ ಕೆತ್ತ್ಯಾರ ನೋಡ್ರಿ. ಅಲ್ಲೆ ನೋಡ್ರಿ ಗುಹಾದ ಮುಂದ ಇಬ್ಬ್ರು ದ್ವಾರಪಾಲಕರು ಕೈಯಾಗ ಕಮಲದ ಹೂ ಹಿಡಕೊಂಡ ನಿಂತಾರ ಏನ್ ಚಂದ ಕೆತ್ತ್ಯಾರ ನೋಡ್ರಿ. ಒಳಗ ಬರ್ರಿ , ಛತ್ತ ಮ್ಯಾಗ ನೋಡ್ರಿ ಅನಂತಪದ್ಮನಾಭ ಮಲಗ್ಯಾನ, ಬ್ರಹ್ಮ, ವಿಷ್ಣು, ಶಿವ ಮತ್ತ ಅಷ್ಟದಿಕ್ಪಾಲರು ನಿಂತದ್ದನ್ನ ಹ್ಯಾಂಗ್ ಕೆತ್ಯಾರ್ ನೋಡ್ರಿ. ಮುಂದ ಮೂರನೇ ಗುಹೆ ನೋಡೂಣಂತ ಬರ್ರಿ. ಈ ಮೂರನೇ ಗುಹಾನೂ ವಿ಼ಷ್ಣುಗ ಸಂಬಂಧಿಸಿದ್ದ ನೋಡ್ರಿ. ಪರವಾಸುದೇವ, ಭುವರಾಹ,ಹರಿಹರ ಮತ್ತು ನರಸಿಂಹ, ಮೂರ್ತಿಗಳನ್ನ ಎಷ್ಟ ಚಂದ ಕೆತ್ತ್ಯಾರ ನೋಡ್ರಿ. ಇಲ್ಲೆ ಮಂಗಲೇಶನು ಶಾಲಿವಾಹನ ಶಕ ೫೭೮ ರಲ್ಲಿ ಮಂದಿರ ನಿರ್ಮಾಣದ ಅಂಕಿ ಅಂಶಗಳನ್ನ ಹೇಳುವಂತಾ ಶಾಸನವನ್ನ ಕೆತ್ತ್ಯಾರ. ಇದ ನೋಡ್ರಿ ನಾಲ್ಕನೇ ಗುಹೆ. ಇದಕ್ಕ ಜೈನ ಬಸದಿ ಅಂತಾರ. ಈ ಗುಹಾ ತುಂಬಾ ಜೈನ ಗುರು ಮಹಾವೀರನ ಮೂರ್ತಿ ಕೆತ್ತ್ಯಾರ. ಇಲ್ಲೆ ನೋಡ್ರಿ ೧೨ ಶತಮಾನದ ಹಳೆಯ ಕನ್ನಡ ಶಾಸನ . ಗುಹೆಯ ಕಂಬದ ಮ್ಯಾಲೆ ಗ್ವಾಡಿ ಮ್ಯಾಲೆ ಎಲ್ಲಾ ಕಡೆನೂ ತೀರ್ಥಂಕರರ ಮೂರ್ತಿ ಅದಾವು. ಕೆಲವು ವಿದ್ವಾಂಸರ ಪ್ರಕಾರ ಇದು ೮ ನೇ ಶತಮಾನದ ಗುಹಾ.
No comments:
Post a Comment